ಟೈಗರ್ ಮುತ್ತುವೇಲ್ ಪಾಂಡಿಯನ್ ಈಸ್ ಬ್ಯಾಕ್.. ಸೂಪರ್ ಸ್ಟಾರ್ ರಜನಿಕಾಂತ್ ಆರ್ಭಟ ಮುಂದುವರೆದಿದೆ. ಫಸ್ಟ್ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಪ್ರತಿದಿನ 100 ಕೋಟಿ ರೂ. ಗಳಿಸಿ ಸಿನಿಮಾ ದಾಖಲೆ ಬರೆದಿದೆ. 'ಕೂಲಿ' ಮಾಡದ ಮ್ಯಾಜಿಕ್ ಮತ್ತೆ ಬಂದ 'ಜೈಲರ್' ಮಾಡಿದ್ದಾನೆ.

'ಜೈಲರ್' ಕಥೆಯನ್ನು ಮುಂದುವರೆಸಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸುವಲ್ಲಿ ನೆಲ್ಸನ್ ಅಂಡ್ ಟೀಮ್ ಸಕ್ಸಸ್ ಕಂಡಿದೆ. ಎಲ್ಲಾ ಕಡೆ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಿ 'ಪ್ರೇಮದ ಊರಲಿ' ದರ್ಬಾರ್ ನಡುವೆ ಕೂಡ ತಲೈವಾ ಮ್ಯಾಜಿಕ್ ನಡೀತಿದೆ.

ವೀಕೆಂಡ್ ಕಲೆಕ್ಷನ್

ಅಕ್ಟೋಬರ್ 15ರಂದು ಗುರುವಾರ 'ಜೈಲರ್- 2' ಸಿನಿಮಾ ತೆರೆಗಪ್ಪಳಿಸಿತ್ತು. ನಾಲ್ಕು ದಿನ ಲಾಂಗ್ ವೀಕೆಂಡ್ ಚಿತ್ರದ ಗಳಿಕೆಗೆ ವರವಾಗಿದೆ. ಇನ್ನೆರಡು ದಿನ ದಸರಾ ರಜೆ ಸಿನಿಮಾ ಆದಾಯ ವೃದ್ಧಿಸಲಿದೆ. ಫಸ್ಟ್ ವೀಕೆಂಡ್ ಸಿನಿಮಾ ವಿಶ್ವದಾದ್ಯಂತ 424.25 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಆಕ್ಷನ್ ಥ್ರಿಲ್ಲರ್ ಚಿತ್ರ ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮೊದಲ ದಿನ 125.25 ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 2ನೇ ದಿನ 90 ಕೋಟಿ ರೂ, 3ನೇ ದಿನ 144 ಕೋಟಿ ರೂ. ಹಾಗೂ 4ನೇ ದಿನವಾದ ನಿನ್ನೆ ಭಾನುವಾರ 107 ಕೋಟಿ ರೂ. ಬಾಚಿಕೊಂಡಿದೆ.

ತಮಿಳು ವರ್ಷನ್ ಹೆಚ್ಚು

ಉತ್ತರ ಭಾರತದಲ್ಲಿ ನಿರೀಕ್ಷಿತ ಮಟ್ಟಕ್ಕೆ 'ಜೈಲರ'-2 ಸಿನಿಮಾ ಕಲೆಕ್ಷನ್ ಮಾಡ್ತಿಲ್ಲ. ಇನ್ನುಳಿದಂತೆ ತಮಿಳು ವರ್ಷನ್ ಆರ್ಭಟ ಜೋರಾಗಿದೆ. ತಮಿಳುನಾಡು ಬಿಟ್ಟು ಹೊರ ಭಾಗಗಳಲ್ಲಿ ಕೂಡ ಸಾಕಷ್ಟು ಜನ ಮೂಲ ಭಾಷೆಯಲ್ಲೇ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಹಾಗಾಗಿ ತಮಿಳು ವರ್ಷನ್ ಗಳಿಕೆ ಹೆಚ್ಚಾಗಿದೆ.

ಕರ್ನಾಟಕ ಕಲೆಕ್ಷನ್

ರಾಜ್ಯದಲ್ಲಿ ಮೊದಲ ನಾಲ್ಕು ದಿನಕ್ಕೆ 'ಜೈಲರ'-2 ಕಲೆಕ್ಷನ್ 40 ಕೋಟಿ ರೂ. ಗಡಿ ದಾಟಿದೆ. ಕನ್ನಡ ವರ್ಷನ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಗುರುವಾರ ತೆರೆಕಂಡ ಸಿನಿಮಾ ಕ್ರಮವಾಗಿ 14.70 ಕೋಟಿ ರೂ, 7.10 ಕೋಟಿ ರೂ, 9.07 ರೂ, ಹಾಗೂ 10.02 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ.