ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿದೆ. ಸರಣಿಯ ಎರಡು ಸಿನಿಮಾಗಳು ಸಕ್ಸಸ್ ಕಂಡಿದ್ದು ಮೂರನೇ ಸಿನಿಮಾ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಸಾಕಷ್ಟು ಜನ ಮತ್ತೆ ಕಥೆ ಮುಂದುವರೆಸುವುದು ಬೇಡ ಎನ್ನುತ್ತಿದ್ದಾರೆ. ಅಭಿಮಾನಿಗಳಂತೂ ಮುತ್ತುವೇಲ್ ಪಾಂಡಿಯನ್(ರಜನಿಕಾಂತ್) ಹಾಗೂ ಕಾಂತ ಕಲ್ಪಕ್(ವಿದ್ಯಾ ಬಾಲನ್) ವೈರತ್ವ ನೋಡೋಕೆ ಕಾಯ್ತಿದ್ದಾರೆ.

ಹೌದು.. ಓಪನ್ ಎಂಡ್ ಕ್ಲೈಮ್ಯಾಕ್ಸ್ ಇಟ್ಟು ನೆಲ್ಸನ್ 'ಜೈಲರ್- 2' ಸಿನಿಮಾ ಮುಗಿಸಿದ್ದಾರೆ. ಕೊನೆಗೆ ವಿಜಯ್ ಸೇತುಪತಿ ಪಾತ್ರವನ್ನು ಪರಿಚಯಿಸಿ ಕುತೂಹಲ ಹೆಚ್ಚಿಸಿದ್ದಾರೆ. ಸತ್ತು ಹೋದ್ಲು ಎಂದುಕೊಂಡಿದ್ದ ಕಾಂತ ಮತ್ತೆ ಮುತ್ತುವೇಲ್ ಪಾಂಡಿಯನ್‌ಗೆ ಮೆಸೇಜ್ ಕಳುಹಿಸಿದ್ದಾಳೆ. ಮಗನನ್ನು ಕೊಂದ ಕೇಸ್‌ನಲ್ಲಿ ಮುತ್ತುವೇಲ್ ಪಾಂಡಿಯನ್‌ ಜೈಲು ಸೇರಿದ್ದಾನೆ. ಮುಂದೆ ಏನು ಎನ್ನುವುದು ಪಾರ್ಟ್‌- 3 ಕಥೆ ಎನ್ನುವುದು ಗೊತ್ತಾಗುತ್ತಿದೆ.

'ಜೈಲರ್- 3' ಯಾವಾಗ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈಗಾಗಲೇ 'ಜೈಲರ್- 3' ಸಣ್ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ಅಧಿಕೃತ ಟೀಸರ್ ಅಲ್ಲ. ಫ್ಯಾನ್ ಮೇಡ್ ಟೀಸರ್.. ಎಐ ಬಳಸಿ ಮಾಡಿರುವ ಫನ್ನಿ ಟೀಸರ್. ಆದರೆ ಅಭಿಮಾನಿಗಳಿಗೆ ಸಖತ್ ಮಜಾ ಕೊಡ್ತಿದೆ. ಕಾಂತ ಜೊತೆಗಿನ ಮುತ್ತುವೇಲ್ ಪಾಂಡಿಯನ್ ಚಾಟಿಂಗ್ ವಿಚಾರ ಆತನ ಪತ್ನಿ ವಿಜಯಾ(ರಮ್ಯಾಕೃಷ್ಣ)ಗೆ ಗೊತ್ತಾಗಿ ಹೋಗಿದೆ. ಸ್ವತಃ ಕಾಂತಾ ಗೊತ್ತಾಗುವಂತೆ ಮಾಡಿದ್ದಾಳೆ. ಹಾಗಾಗಿ ಪತ್ನಿ ಬಳಿ ಮುತ್ತುವೇಲ್ ತಗ್ಲಾಕಿಕೊಂಡಂತೆ ಫನ್ನಿಯಾಗಿ ಟೀಸರ್ ಡಿಸೈನ್ ಮಾಡಲಾಗಿದೆ.

ಎಐ ಬಳಸಿ ಬಹಳ ನೈಜವಾಗಿ ಟೀಸರ್ ಕ್ರಿಯೇಟ್ ಮಾಡಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಖತ್ ಮಜವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 'ಜೈಲರ್- 2' ಸಿನಿಮಾ 5 ದಿನಕ್ಕೆ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಸಕ್ಸಸ್‌ ಬೆನ್ನಲ್ಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ನಡೀತಿದೆ. ಗ್ರೀಸ್‌ನಲ್ಲಿ ನಡೆಯುವ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ರಜನಿಕಾಂತ್ ಸಹ ಸಾಕ್ಷಿ ಆಗಲಿದ್ದಾರೆ. ಬಳಿಕ ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.