ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ್ದಾರೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಗಣಿ 'ಚೆಲ್ಲಾಟ' ಚಿತ್ರದಲ್ಲಿ ನಟಿಸಿ ಹೀರೊ ಆಗಿದ್ದರು. ಬಳಿಕ ಬಂದಿದ್ದ 'ಮುಂಗಾರುಮಳೆ' ಸಿನಿಮಾ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಆ ಬಳಿಕ ಕೂಡ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು.

ಚಿತ್ರರಂಗದಲ್ಲಿ ಗಣೇಶ್ 20 ವರ್ಷದ ಸಂಭ್ರಮವನ್ನು ಅನುಶ್ರೀ ಯೂಟ್ಯೂಬ್‌ ಚಾನಲ್ ಸಂದರ್ಶನದಲ್ಲಿ ಆಚರಿಸಲಾಗಿದೆ. ನಿರ್ದೇಶಕ ಯೋಗರಾಜ್ ಭಟ್ ಕೂಡ ಸಾಥ್ ಕೊಟ್ಟಿದ್ದಾರೆ. ಸಂದರ್ಶನದ ಪ್ರೋಮೊ ಸದ್ಯ ವೈರಲ್ ಆಗ್ತಿದೆ. ಹಾಡು, ತಮಾಷೆ ಅಂತ ಸಖತ್ ಮಜವಾಗಿದೆ. ಭಾವುಕ ಕ್ಷಣಗಳು ಇರುವುದು ಪ್ರೋಮೊ ನೋಡಿದ್ರೆ ಗೊತ್ತಾಗ್ತಿದೆ.

ಯಾರೋ ಗಣೇಶ್ ಇನ್‌ಸೆಕ್ಯುರಿಟಿ ಬಗ್ಗೆ ಕೇಳಿದ್ದಕ್ಕೆ "ಸೆಕ್ಯುರಿಟಿ ಮಗ ನಾನು, ನನಗ್ಯಾವ ಇನ್‌ಸೆಕ್ಯುರಿಟಿ" ಎಂದು ಗಣೇಶ್ ಹೇಳಿರುವುದು ವೈರಲ್ ಆಗ್ತಿದೆ. ಗಣಿ ನಟನೆಯ 'ಬೃಂದಾವಿಹಾರಿ' ಸಿನಿಮಾ ನವೆಂಬರ್ 20ರಂದು ತೆರೆಗೆ ಬರ್ತಿದೆ. 'ಪಿನಾಕ' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗಣೇಶ್ ತಮ್ಮ ಜೀವನದ ವಿವಧ ಮಜಲುಗಳನ್ನು ಮೆಲುಕು ಹಾಕಿದ್ದರು. ಗಣೇಶ್ ತಂದೆ ಕಿಶನ್ ಬಹದ್ದೂರ್ ಹಾಗೂ ತಾಯಿ ಸುಲೋಚನಾ.

ಗಣೇಶ್ ಅವರಿಗೆ ಇಬ್ಬರು ಸಹೋದರರು. ಅವರಿಬ್ಬರೂ ಕೂಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡು ಸೋತಿದ್ದಾರೆ. ನಟನೆಯ ಜೊತೆಗೆ ಗಣೇಶ್ ನಿರ್ಮಾಪಕರು ಆಗಿದ್ದಾರೆ. ನೆಲಮಂಗಲದ ಬಳಿ ಇರುವ ಅಡಕಮಾರನಹಳ್ಳಿ ಹುಟ್ಟೂರು. ಬಡ ಕುಟುಂಬದಿಂದ ಬದ ಗಣೇಶ್ ಅವರಿಗೆ ಚಿಕ್ಕಂದಿನಿಂದ ಸಿನಿಮಾ ಹುಚ್ಚು. ಪಿಯುಸಿ ಬಳಿಕ ಆದರ್ಶ ಫಿಲ್ಮ್ ಇನ್ಸಿಟ್ಯೂಟ್ ಸೇರಿ ನಟನೆಯ ಪಟ್ಟುಗಳನ್ನು ಕಲಿತರು. ಬಳಿಕ 'ಅತ್ತಿಗೆ' ಧಾರಾವಾಹಿಯಲ್ಲಿ ನಟಿಸಿ ಬಣ್ಣದಲೋಕಕ್ಕೆ ಕಾಲಿಟ್ಟರು. ಉದಯ ಟಿವಿಯಲ್ಲಿ ಬರ್ತಿದ್ದ 'ಕಾಮಿಡಿ ಟೈಂ' ಕಾರ್ಯಕ್ರಮ ನಿರೂಪಣೆ ಮಾಡಿ ಮನೆ ಮಾತಾಗಿದ್ದರು.