ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ತಿಂಗಳ ಹಿಂದೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಇದೀಗ ದಸರಾ ಸಂಭ್ರಮದಲ್ಲೇ ಕಿರಿಮಗಳಿಗೆ ನಾಮಕರಣ ಮಾಡಿ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗಳಿಗೆ ದೇವಿ ಎಂದು ಹೆಸರಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಇಬ್ಬರೂ ಮಕ್ಕಳ ಜೊತೆಗಿರುವ ಫೋಟೊವನ್ನು ದೀಪ್ವೀರ್ ದಂಪತಿ ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮೊದಲ ಮಗುವಿಗೆ ದಂಪತಿ ಜನ್ಮ ನೀಡಿದ್ದರು. ಆಕೆಗೆ ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದಾರೆ. ಈಗ ದುವಾ ತಂಗಿಗೆ ದೇವಿ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಚಿತ್ರ ವಿಚಿತ್ರ ಹೆಸರುಗಳನ್ನು ಮಕ್ಕಳಿಗೆ ಇಡುವುದು ಈಗ ಟ್ರೆಂಡ್ ಆಗಿದೆ. ಐರಿಶ್, ಅರೇಬಿಯಾ ಭಾಷೆಯ ಪದಗಳನ್ನು ಕೂಡ ಮಕ್ಕಳಿಗೆ ಹೆಸರನ್ನು ಇಡುತ್ತಿದ್ದಾರೆ. ಆದರೆ ದೀಪಿಕಾ ಮಾತ್ರ ತಮ್ಮ ಮಕ್ಕಳಿಗೆ ದುವಾ, ದೇವಿ ಎಂದು ನಾಮಕರಣ ಮಾಡಿರುವುದು ವಿಶೇಷ.
ದೀಪಿಕಾ ಹಾಗೂ ರಣ್ವೀರ್ ಪೋಸ್ಟ್ಗೆ ಅಭಿಮಾನಿಗಳು, ಆಪ್ತರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ. 'ಧುರಂಧರ್' ಸರಣಿ ಸಿನಿಮಾಗಳಿಂದ ರಣ್ವೀರ್ ಬಾಕ್ಸಾಫೀಸ್ ಶೇಕ್ ಮಾಡಿದ್ದಾರೆ. ಮೊದಲ ಮಗುವಿನ ಬಳಿಕ ದೀಪಿಕಾ ಕೊಂಚ ವಿರಾಮ ಪಡೆದಿದ್ದರು. ನಡುವೆ 'ಕಿಂಗ್' ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಶಾರುಖ್ ಖಾನ್ ನಾಯಕರಾಗಿರುವ ಈ ಸಿನಿಮಾ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.