ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೆ ಸುದ್ದಿಯಲ್ಲಿ ಇರ್ತಾರೆ. ಪ್ರಶ್ನಿಸದೇ ಒಪ್ಪಬೇಡಿ ಎನ್ನುವಂತೆ ಎಲ್ಲಾ ವಿಚಾರಗಳ ಬಗ್ಗೆ ತಮ್ಮದೇ ಆಲೋಚನೆಗಳನ್ನು ಅವರು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಡಾ. ರಾಜ್ಕುಮಾರ್ ಪುಣ್ಯಭೂಮಿಗೆ ಸರ್ಕಾರ 2.5 ಎಕರೆ ಭೂಮಿ ಕೊಟ್ಟಿರುವುದನ್ನು ಪ್ರಶ್ನಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿರುವ ಚೇತನ್ ಅಹಿಂಸಾ ಡಾ. ರಾಜ್ಕುಮಾರ್ ಅವರಿಂದ ಮಾತ್ರ ಕನ್ನಡ ಉಳಿದಿದೆ ಎನ್ನುವುದನ್ನು ನಾನು ನಂಬಲ್ಲ ಎಂದಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗ ಅಂದ್ರೆ ಕೇವಲ ಯಶ್ ಹಾಗೂ ರಿಷಬ್ ಶೆಟ್ಟಿ ಅಲ್ಲ. ಅವರಿಬ್ಬರು ಗೆದ್ದ ಮಾತ್ರಕ್ಕೆ ಅದು ಚಿತ್ರರಂಗದ ಗೆಲುವು ಅಲ್ಲ ಎಂದಿದ್ದಾರೆ. ಚೇತನ್ ಅಹಿಂಸಾ ಹೇಳಿಕೆ ಈಗ ಸಖತ್ ವೈರಲ್ ಆಗ್ತಿದೆ.
ಕನ್ನಡ ಚಿತ್ರರಂಗಕ್ಕೆ ಕನ್ನಡ ನಾಡು, ನೆಲೆ, ನುಡಿಗೆ ಅಣ್ಣಾವ್ರ ಕೊಡುಗೆ ಮರೆಯೋಕೆ ಸಾಧ್ಯವಿಲ್ಲ. ಕನ್ನಡ ಅಂದ್ರೆ ಅಣ್ಣಾವ್ರು, ಅಣ್ಣಾವ್ರು ಅಂದ್ರೆ ಕನ್ನಡ ಎನ್ನುವುದನ್ನು ಸಾಕಷ್ಟು ಜನ ಒಪ್ಪಿಕೊಂಡಿದ್ದಾರೆ. "ಕನ್ನಡ ಉಳಿದಿರುವುದೇ ಅಣ್ಣಾವ್ರಿಂದ. ಅವ್ರಿಗೆ ಎರಡು ಎಕರೆ ಜಾಗ ಕೊಟ್ಟಿರುವುದಕ್ಕೆ ನಿಮ್ಮ ತಕರಾರು ಯಾಕೆ ಎನ್ನುವ ಪ್ರಶ್ನೆಗೆ ಚೇತನ್ ಪ್ರತಿಕ್ರಿಯಿಸಿದ್ದಾರೆ. "ನಾವೆಲ್ಲಾ ಡಾ. ರಾಜ್ಕುಮಾರ್ ಕಲೆಯ ಅಭಿಮಾನಿಗಳು. ಚಿಕ್ಕಂದಿನಲ್ಲಿ ನಾನು ಅವರಂತೆ ಏಕಪಾತ್ರಾಭಿನಯ ಮಾಡಿದವನು. ಅದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ರೆ ರಾಜ್ಕುಮಾರ್ ಅವರಿಂದ್ಲೇ ಕನ್ನಡ ಉಳಿದಿದೆ ಎನ್ನುವುದನ್ನು ನಾನು ನಂಬಲ್ಲ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯಾರೋ ಒಬ್ಬರಿಂದ ಕನ್ನಡ ಉಳಿದಿಲ್ಲ. ಇದಕ್ಕೆ ಸಾಕಷ್ಟು ಜನರ ಕೊಡುಗೆಯಿದೆ. ತಮ್ಮ ಕಲೆಯ ಮೂಲಕ ರಾಜ್ಕಮಾರ್ ಕೊಡುಗೆ ಕೊಟ್ಟಿದ್ದಾರೆ. ರಾಜ್ಕಮಾರ್ ಇದ್ದಿದ್ರು 2 ಎಕರೆ ಜಾಗ ಕೊಟ್ರೆ ಬೇಡ ಎನ್ನುತ್ತಿದ್ರು. ಇದು ಬರೀ ರಾಜಕೀಯಕ್ಕಾಗಿ ಕೊಟ್ಟಿರುವುದು ಎಂದು ಚೇತನ್ ಹೇಳಿದ್ದಾರೆ. ರಿಷಬ್ ಶೆಟ್ಟಿ, ಯಶ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿ ಎಲ್ಲರೂ ಕರ್ನಾಟಕದತ್ತ ನೋಡುವಂತಾಗಿದೆ ಎನ್ನುವ ಬಗ್ಗೆ ಕೂಡ ಚೇತನ್ ಮಾತನಾಡಿದ್ದಾರೆ.
ಯಶ್ ಹಾಗೂ ರಿಷಬ್ ಒಳ್ಳೆ ನಟರು. ಅವರ ಸಾಧನೆ ಒಪ್ಪುವಂಥದ್ದು. ಆದರೆ ವೈಯಕ್ತಿಕ ಬೆಳವಣಿಗೆ ಎಲ್ಲರ ಬೆಳವಣಿಗೆ ಅಲ್ಲ. ಯಾರೋ ಮಹಿಳಾ ಪ್ರಧಾನಿ ಆದ ಮಾತ್ರಕ್ಕೆ ಎಲ್ಲಾ ಮಹಿಳೆಯರಿಗೆ ನ್ಯಾಯ ಸಿಕ್ಕಿದಂತೆ ಅಲ್ಲ. ದಲಿತರೊಬ್ಬರು ಮುಖ್ಯಮಂತ್ರಿಯಾದಕ್ಕೆ ಎಲ್ಲಾ ದಲಿತರಿಗೆ ನ್ಯಾಯ ಸಿಕ್ಕಿದೆ ಅಂತಲ್ಲ. ಒಬ್ಬ ನಟ, ನಿರ್ದೇಶಕ ದುಡ್ಡು ಮಾಡಿದ ಮಾತ್ರಕ್ಕೆ ಇಡೀ ಇಂಡಸ್ಟ್ರಿಗೆ ಒಳ್ಳೆಯದಾಗಿದೆ ಅಂತಲ್ಲ. ಒಟ್ಟಾರೆ ಕನ್ನಡ ಚಿತ್ರರಂಗ ಬೆಳೆಯಬೇಕು. ಅದಕ್ಕೆ ಸಿನಿಮಾಗಳ ಸಕ್ಸಸ್ ರೇಟ್ ಹೆಚ್ಚಾಗಬೇಕು. ವೈಯಕ್ತಿಕವಾಗಿ ಯಾರೋ ಗೆದ್ದರೂ ಪರವಾಗಿಲ್ಲ. ಆದ್ರೆ ಒಟ್ಟಾರೆ ಚಿತ್ರರಂಗದ ಗೆಲುವು ಮುಖ್ಯ ಎಂದು ಚೇತನ್ ವಿವರಿಸಿದ್ದಾರೆ.
ಈ ವ್ಯಕ್ತಿಯ ಮುಖ್ಯವಾದ ಸಮಸ್ಯೆ ಏನು ಅಂತ ಕೇಳಿ, ಈ ವ್ಯಕ್ತಿ ಇಲ್ಲಿಯ ವರೆಗೂ ಯಾರೊಬ್ಬರ ಬಗ್ಗೆ ಸರಿಯಾದ ಅಭಿಪ್ರಾಯ ವ್ಯಕ್ತಪಡಿಸಿಲ್ಲ.!🤡🥱 pic.twitter.com/aHWxIs6yhl
— ₘₒₜᵢᵥₐₜₑd!ₗᵢₗ!Dₑₘₒₙ (@AryakavyaA) October 25, 2026
ಕನ್ನಡ ಉಳಿದಿದ್ದ ಅಂದ್ರೆ ಅದು ರಾಜಕುಮಾರ್ ಇಂದ ಅನ್ನೋದನ್ನು ನಾನ್ ನಂಬೋನಲ್ಲ.🙄
— ʙᴀɴɢʙᴀɴɢ😎🔥 (@RoonaVikranth) October 24, 2026
- ಚೇತನ್ #Rajkumar #KFI pic.twitter.com/d6V8P094Tn