ಕೇರಳಂ ನಟಿ ಅನುಪಮಾ ಪರಮೇಶ್ವರನ್ ಕನ್ನಡ ಚಿತ್ರರಸಿಕರಿಗೂ ಚಿರಪರಿಚಿತ ಹೆಸರು. ನಟಸಾರ್ವಭೌಮ ಬಳಿಕ ಆಕೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಆದರೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ತೆಲುಗು, ತಮಿಳಿನಲ್ಲಿ ಕೂಡ ಭಾರೀ ಕ್ರೇಜ್ ಇದೆ. ಅನುಪಮಾ ನಟಿಸಿರುವ 'ಕ್ರೇಜಿ ಕಲ್ಯಾಣಂ' ಸಿನಿಮಾ ತೆರೆಗೆ ಬಂದಿದೆ.

ಸಿನಿಮಾ ಪ್ರಚಾರಕ್ಕಾಗಿ ಅನುಪಮಾ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಿನಿಮಾ ಜೊತೆ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟೈಟಲ್ ಹೇಳುವಂತೆ ಇದು ಮದುವೆ ಸುತ್ತಾ ನಡೆಯು ಕಥೆ. ಹಾಗಾಗಿ ಅನುಪಮಾ ಮದುವೆ ಬಗ್ಗೆ ಕೂಡ ಪ್ರಶ್ನೆಗಳು ಎದ್ದಿವೆ. ಈ ವಿಚಾರದಲ್ಲಿ ತಮ್ಮ ನಿಲುವನ್ನು ಆಕೆ ವ್ಯಕ್ತಪಡಿಸಿದ್ದಾರೆ.

ಮದುವೆ ಎನ್ನುವುದು ಇಬ್ಬರೂ ಸಂತೋಷವಾಗಿ ಬದುಕುವುದಕ್ಕೆ ಮಾಡಿಕೊಂಡ ಪದ್ಧತಿ. ಆದ್ರೆ ಹೆಣ್ಣನ್ನು ಮನೆ ಕೆಲಸದವಳಾಗಿ ಮಾಡುವುದಕ್ಕೆ ಅಲ್ಲ ಎಂದು ನನ್ನ ಪಾತ್ರ ಕೀರ್ತಿ ಉದ್ದೇಶ. ನಿಜ ಜೀವನದಲ್ಲಿ ಕೂಡ ಇದೇ ನನ್ನ ಅಭಿಪ್ರಾಯ. ಈ ಸಿನಿಮಾದಲ್ಲಿ ಇರುವಂತೆ ನಮ್ಮ ಮನೆಯಲ್ಲಿ ಮದುವೆ ಆಗುವಂತೆ ಯಾವುದೇ ಒತ್ತಡ ಇಲ್ಲ ಎಂದು ಅನುಪಮಾ ತಿಳಿಸಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ತನ್ನ ಮದುವೆಯ ಬಗ್ಗೆ ಪೋಷಕರಿಂದ ಯಾವುದೇ ಬಲವಂತ ಅಥವಾ ಆತುರ ಇಲ್ಲ ಎಂದು ಅನುಪಮಾ ಹೇಳಿದ್ದಾರೆ. ಮದುವೆ ವಿಚಾರದಲ್ಲಿ ನನಗೆ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮದುವೆಗೆ ಮುನ್ನ ತಾಯ್ತನ ಆನಂದಿಸಲು ಮತ್ತು ಮಗುವನ್ನು ಹೊಂದಲು ಬಯಸುವುದಾಗಿ ಅನುಪಮಾ ಪರಮೇಶ್ವರನ್ ಅಂತರಾಳ ಬಿಚ್ಚಿಟ್ಟಿದ್ದಾರೆ.