ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಹಾಗೂ SHR ಮಾಲಕಿ ಕಾವ್ಯಾ ಮಾರನ್ ಮದುವೆ ಅಧಿಕೃತವಾಗಿದೆ. ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಗಣ್ಯಾತಿಗಣ್ಯರಿಗೆ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗಿದೆ. ನವೆಂಬರ್ 21ರಂದು ಚೆನ್ನೈನ ಅಣ್ಣಾ ಸಾಲೈನಲ್ಲಿರುವ 'ಐಟಿಸಿ ಗ್ರ್ಯಾಂಡ್ ಚೋಳ' (ITC Grand Chola) ಹೋಟೆಲ್ನಲ್ಲಿ ನಡೆಯಲಿದೆ.
ನವೆಂಬರ್ 11ರಂದು ಗ್ರೀಸ್ನಲ್ಲಿ ಅನಿರುದ್ಧ್ ಹಾಗೂ ಕಾವ್ಯಾ ಮದುವೆ ನಡೆಯಲಿದೆ. ಈ ಡೆಸ್ಟಿನೇಷನ್ ವೆಡ್ಡಿಂಗ್ ಸಮಾರಂಭದಲ್ಲಿ ಕೆಲವೇ ಆಪ್ತರು ಹಾಜರಿರುತ್ತಾರೆ. ಬಳಿಕ ಚೆನ್ನೈನಲ್ಲಿ ನಡೆಯುವ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ನವಜೋಡಿಗೆ ಹಾರೈಸಲಿದ್ದಾರೆ. ನಿನ್ನೆ(ಅಕ್ಟೋಬರ್ 16) ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಕಲಾನಿಧಿ ಮಾರನ್ ದಂಪತಿ ಭೇಟಿ ಮಾಡಿ ಮಗಳ ಮದುವೆ ಆರತಕ್ಷತೆಗೆ ಆಮಂತ್ರಣ ನೀಡಿದ್ದರು. ಇದು ಮದುವೆ ಸುಳಿವು ನೀಡಿತ್ತು. ಈಗ ಅಧಿಕೃತವಾಗಿದೆ.
ಯಾರಿಗೆಲ್ಲಾ ಮದುವೆ ಆಮಂತ್ರಣ ನೀಡುತ್ತಿದ್ದಾರೆ ಎನ್ನುವುದರ ಬಗ್ಗೆ ಸನ್ ನ್ಯೂಸ್ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ತಮಿಳುನಾಡು ಸಿಎಂ ಅವರನ್ನು ಭೇಟಿ ಮಾಡಲು ಭಾವಿ ಮಾವನ ಜೊತೆ ಅನಿರುದ್ಧ್ ರವಿಚಂದರ್ ಕೂಡ ಹೋಗಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದೆ. ಶೀಘ್ರವೇ ಮದುವೆ ಶಾಸ್ತ್ರಗಳಲ್ಲಿ ಭಾಗವಹಿಸಿ ಜೋಡಿ ವಿದೇಶಕ್ಕೆ ತೆರೆಳಲಿದೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡು ಗೌವರ್ನರ್ ರಾಜೇಂದ್ರ ವಿಶ್ವನಾಥ್ ಆಲೇಕರ್ ಹೀಗೆ ಗಣ್ಯರನ್ನು ಕಲಾನಿಧಿ ಮಾರನ್ ತಮ್ಮ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಚಿತ್ರರಂಗದ ತಾರೆಯರಿಗೂ ಆಮಂತ್ರಣ ತಲುಪಲಿದೆ. ಸದ್ಯ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಜೈಲರ್' ಚಿತ್ರಕ್ಕೂ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
அழைப்பு
— Sun News (@sunnewstamil) October 17, 2026
முதலமைச்சர் சி. ஜோசப் விஜயை சந்தித்து, காவியா கலாநிதி மாறன் - அனிருத் ரவிச்சந்தர் திருமண வரவேற்பு விழா அழைப்பிதழை வழங்கினார் சன் டிவி குழுமத் தலைவர் கலாநிதி மாறன். காவேரி கலாநிதி, அனிருத் ரவிச்சந்தர் உடன் இருந்தனர்.#SunNews | #KaviyaMaran | #Anirudh | #Vijay pic.twitter.com/SDSe0dVoEx